ಟೂಲ್ ರೂಮ್ ಉದ್ಯಮದ ವಿಶ್ವಾಸಪೂರ್ಣ ಪ್ರವಾಸ

Udyam Prakashan Kannad    10-Oct-2020   
Total Views |
4_1 H x W: 0 x 
1_1  H x W: 0 x
 
ನಮ್ಮ ಕಂಪನಿಯು ಇಂದು ಭಾರತದಲ್ಲಿ ಎಲ್ಲ ರೀತಿಯ ವಾಹನ ಉದ್ಯಮಗಳಿಗೆ ಫಿಕ್ಸ್ಚರ್ ಗಳನ್ನು ಪೂರೈಸುತ್ತಾರೆ. ವಾಹನಗಳ ಮಹತ್ವಪೂರ್ಣವಾದ ಕಾರ್ಯವಸ್ತುಗಳಿಗೆ ಯಂತ್ರಣೆಯನ್ನು ಸರಳವಾಗಿ ಮತ್ತು ನಿಖರವಾಗಿ ಮಾಡಲು ಫಿಕ್ಸ್ಚರ್ ಅತ್ಯಾವಶ್ಯಕವಾಗಿರುತ್ತದೆ. ನಾವು ಪ್ರಾರಂಭದಿಂದಲೇ ತಯಾರಿಸಿರುವ ನೀತಿಗಳ ಪ್ರಕಾರ ಯಾವುದೇ ಫಿಕ್ಸ್ಚರ್ ತಯಾರಿಸುವಾಗ, ಕಾರ್ಯವಸ್ತುಗಳನ್ನು ತಯಾರಿಸವಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಂದ ಅವುಗಳ ಅಗತ್ಯವನ್ನು ತಿಳಿದುಕೊಳ್ಳುತ್ತೇವೆ. ಕಾರಣ ಅವರ ಆವಶ್ಯಕತೆಗಳು ಮತ್ತು ವಿಚಾರಗಳ ಕುರಿತು ಆಳವಾದ ಅಭ್ಯಾಸವನ್ನು ಮಾಡಿ ನಂತರವೇ ಫಿಕ್ಸ್ಚರ್ ಗಳನ್ನು ತಯಾರಿಸುತ್ತೇವೆ, ಇದೊಂದು ಸೂಕ್ತವಾದ ಪರ್ಯಾಯವೆಂದು ದೃಢಪಟ್ಟಿದೆ.
ಅಂದಾಜು 1990 ರ ತನಕ ದೊಡ್ಡ ದೊಡ್ಡ ಕಂಪನಿಗಳಲ್ಲಿ ಸ್ವಂತದ್ದೇ ಆದ ಟೂಲ್ ರೂಮ್‌ಗಳಿರುತ್ತಿದ್ದವು. ಈ ಟೂಲ್ ರೂಮ್‌ಗಳಲ್ಲಿ ಆ ಕಂಪನಿಯ ಸ್ವಂತದ್ದೇ ಆದ ಉತ್ಪಾದನೆಯ ರೀತಿಗೆ (ಮ್ಯಾನಿಫ್ಯಾಕ್ಚರಿಂಗ್ ಪ್ರೊಸೆಸ್) ಬೇಕಾಗುವ ‘ಜಿಗ್ಸ್‌-ಫಿಕ್ಸ್ಚರ್ಸ್’ ಅಥವಾ ಸಣ್ಣ ಪುಟ್ಟ ‘ಎಸ್.ಪಿ.ಎಮ್‌.ಎಸ್‌.’ಗಳನ್ನು ಡಿಸೈನ್ಸ್‌ ಮಾಡಿಯೇ ತಯಾರಿಸಲಾಗುತ್ತಿತ್ತು. ಆದರೆ ಮುಂದಿನ ಕಾಲಾವಧಿಯಲ್ಲಿ ಟೂಲ್ ರೂಮ್‌ನಲ್ಲಿ ಮಾಡುತ್ತಿರುವ ಕೆಲಸವು ಲಾಭದಾಯಕವಾಗುವುದಿಲ್ಲ, ಎಂಬ ಕಾರಣಕ್ಕೋಸ್ಕರ ಹಲವಾರು ಧೋರಣಾತ್ಮಕವಾದ ಬದಲಾವಣೆಗಳನ್ನು ಮಾಡಿ ಈ ಕೆಲಸವನ್ನು ಔಟ್ ಸೋರ್ಸಿಂಗ್ ಮೂಲಕ ಮಾಡಿಕೊಳ್ಳಲಾಗುತ್ತಿತ್ತು. ನಿರಂತರವಾಗಿ ಸವಾಲುಗಳಿರುವ ಕೆಲಸಗಳೇ ಬರುತ್ತಿದ್ದವು ಮತ್ತು ಅದರಿಂದ ‘ಎ.ಎಸ್.ಆರ್.’ನ ಪ್ರವಾಸದ ಪ್ರಾರಂಭವಾಯಿತು.

2_1  H x W: 0 x 
ಕ್ಯಾಮ್‌ ಶಾಫ್ಟ್‌‌ನ ವಿ.ಎಮ್.ಸಿ. ಮಶಿನಲ್ಲಿರುವ ಡ್ರಿಲಿಂಗ್ ಫಿಕ್ಸ್ಚರ್
ಆಟೊಮೊಬೈಲ್ ಉದ್ಯಮದಲ್ಲಿ ನಿರಂತರವಾಗಿ ಗ್ರಾಹಕರು ಅವರಲ್ಲಿರುವ ಕ್ಯಾಮ್‌ ಶಾಫ್ಟ್‌‌ಗೆ ವಿ.ಎಮ್.ಸಿ. ಮಶಿನ್‌ನಲ್ಲಿ 4 ಮಿ.ಮೀ. ವ್ಯಾಸದ ರಂಧ್ರಗಳನ್ನು ಮಾಡಲು ಬೇಕಾಗುವ ಫಿಕ್ಸ್ಚರ್‌ನ ಕುರಿತ ವಿಚಾರಿಸುತ್ತಿದ್ದರು. ಇದರಲ್ಲಿ ಇಂಜಿನ್‌ಗೋಸ್ಕರ ಮಾಡಲಾಗುವ ಲುಬ್ರಿಕಂಟ್ ಆಯಿಲ್‌ನ ಪೂರೈಕೆಯನ್ನು ಮಾಡುವುದರೊಂದಿಗೆ ಯಂತ್ರಣೆಯ (ಮಶಿನಿಂಗ್) ಮುಂದಿನ ಆಪರೇಶನ್‌ಗೋಸ್ಕರ ಈ ರಂಧ್ರಗಳನ್ನು ಲೊಕೇಶನ್ ಎಂದೂ ಬಳಸುವುದಾಗಿತ್ತು, ಇದೇ ಈ ರಂಧ್ರಗಳ ಮಹತ್ವವಾಗಿತ್ತು. ಇದರಿಂದಾಗಿ ಈ ರಂಧ್ರಗಳ ನಿಖರವಾದ ಮಾಪನ ಮತ್ತು ರಂಧ್ರಗಳ ಅಕ್ಷಗಳ ಫೋರ್ಜಿಂಗ್‌ನ ಸ್ಥಿತಿ ಇರುವ ಇನ್‌ಲೆಟ್ ಕ್ಯಾಮ್‌ನ ಪ್ರೊಫೈಲ್‌ನೊಂದಿಗೆ ಇಂಟರ್-ರಿಲೇಶನ್ ತುಂಬಾ ನಿರ್ದೋಷವಾದ ಹಂತದಲ್ಲಿ (+20) ಆಗತ್ಯವಾಗಿತ್ತು. (ಚಿತ್ರ ಕ್ರ. 1). ಕ್ಯಾಮ್‌ಶಾಫ್ಟ್ ನ ಗುಣಮಟ್ಟದ ಆವಶ್ಯಕತೆಯನ್ನು ಗಮನಿಸಿ ನಾವು ಫಿಕ್ಸ್ಚರ್‌ನ ಕಲ್ಪನೆಯನ್ನು ರೂಪಿಸುವಾಗ ಕ್ಯಾಮ್‌ಶಾಫ್ಟ್ ನ ಸೆಮಿಫಿನಿಶ್ ಟರ್ನಿಂಗ್ ಮಾಡಿರುವ ಎರಡೂ ಜರ್ನಲ್ ವ್ಯಾಸ (ಡಯಾಮೀಟರ್ಸ್) ಮತ್ತು ಫೋರ್ಜಿಂಗ್ ಸ್ಥಿತಿಯಲ್ಲಿರುವ ಇನ್‌ ಲೆಟ್ ಕ್ಯಾಮ್‌ನ ಪ್ರೊಫೈಲ್‌ನ (ಚಿತ್ರ ಕ್ರ. 2) ಸಂದರ್ಭವನ್ನು
 
3_1  H x W: 0 x
(ರೆಫರನ್ಸ್‌) ಪಡೆಯಲಾಯಿತು. ಜರ್ನಲ್ ವ್ಯಾಸದಲ್ಲಿರುವ ಟಾಲರನ್‌ಸ್‌ ಮತ್ತು ಇನ್‌ ಲೆಟ್ ಕ್ಯಾಮ್‌ನಲ್ಲಿರುವ ಟಾಲರನ್ಸ್‌ ಇದರಲ್ಲಿ ತುಂಬಾ ವ್ಯತ್ಯಾಸವಿರುವುದು, ಇದೇ ಒಂದು ಅಡಚಣೆಯಾಗಿತ್ತು. ಕ್ಯಾಮ್ ಶಾಫ್ಟ್ ನ ಫಿಕ್ಸ್ಚರ್‌ನಲ್ಲಿ ಒರಗಿದ ನಂತರ ಎರಡರಲ್ಲಿ ಒಂದು ಜರ್ನಲ್ ಅಥವಾ ಇನ್‌ಲೆಟ್ ಕ್ಯಾಮ್ ಪ್ರೊಫೈಲ್‌ನ ಸರ್ಫೇಸ್‌ಲ್ಲಿರುವ ಗ್ಯಾಪ್ ಕಾಣಲಾರಂಭಿಸಿತು ಅಲ್ಲದೇ ಅದು ಪ್ರತಿಯೊಂದು ವಸ್ತುವಿನಲ್ಲಿ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಕಾಣುವಂತಹ ಪರಿಣಾಮಗಳು ಗಮನಕ್ಕೆ ಬರಲಾರಂಭಿಸಿದವು. ಇದರಿಂದಾಗಿ ಮುಂದಿನ ಆಪರೇಶನ್ ಮಾಡುವಾಗ ರಿಜೆಕ್ಷನ್ ಆಗುವಂತಹ ಸಾಧ್ಯತೆಯೂ ಕಾಣಲಾರಂಭಿಸಿದವು. ಈ ಸಮಸ್ಯೆಗಳನ್ನು ಪರಿಹರಿಸಲು ಇನ್‌ಲೆಟ್ ಕ್ಯಾಮ್ ಪ್ರೊಫೈಲ್ ಒರಗಿಸಲು ನೀಡಿರುವ ‘ವಿ’ ದೃಢವಾಗಿ ಮಾಡದೇ ಸ್ಪ್ರಿಂಗ್
 
4_1  H x W: 0 x
ಲೋಡೆಡ್ ಮಾಡಲಾಯಿತು. ಇದರ ಪರಿಣಾಮದಿಂದಾಗಿ ಮೊದಲನೇ ಜಾಬ್‌ನ ಎರಡೂ ಜರ್ನಲ್ ವ್ಯಾಸವು ‘ವಿ’ ಬ್ಲಾಕ್‌ನಲ್ಲಿ ಯೋಗ್ಯವಾಗಿ ಒರಗಿದ ನಂತರ ಇನ್‌-ಲೆಟ್ ಕ್ಯಾಮ್ ಪ್ರೊಫೈಲ್ ಒರಗುವಾಗ ಅದರ ಮಾಪನದಲ್ಲಿರುವ ವ್ಯತ್ಯಾಸವು ಸ್ಪ್ರಿಂಗ್‌ನ ಒತ್ತಡದಿಂದಾಗಿ ತನ್ನಷ್ಟಕ್ಕೆ ಅಡ್‌ಜೆಸ್ಟ್‌ ಆಗುತ್ತಿತ್ತು ಮತ್ತು ಕಾರ್ಯವಸ್ತು ಅಪೇಕ್ಷಿಸಿದಂತೆ ಯೋಗ್ಯ ಜಾಗದಲ್ಲಿ ಒರಗುತ್ತಿತ್ತು. ಹಾಗೆಯೇ ಎಕ್ಸಿಸ್ ಪೊಜಿಶನ್ ನಿರ್ಧರಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಇಂತಹ ದೋಷರಹಿತವಾದ ಪರ್ಯಾಯದಿಂದಾಗಿ ಮುಂದೆ ಬರುವಂತಹ ರಿಜೆಕ್ಷನ್ ಕೂಡಾ ಇಲ್ಲದಂತಾಯಿತು. ಚಿತ್ರ ಕ್ರ. 3 ರಲ್ಲಿ ಇದರ ರಚನೆಯನ್ನು ತೋರಿಸಲಾಗಿದೆ.
 
5_1  H x W: 0 x
 
ಮೊದಲಾಗಿ ಕಂಪ್ಯೂಟರೈಜ್ಡ್‌ ಕಾಲ್ಪನಿಕ ಚಿತ್ರವೊಂದನ್ನು ತಯಾರಿಸಲಾಯಿತು. ಗ್ರಾಹಕರಿಂದ ಮನ್ನಣೆಯನ್ನು ಪಡೆಯಲಾಯಿತು. ಅದರೊಂದಿಗೆ ಅದರ ಉತ್ಪಾದನೆಯನ್ನೂ ಮಾಡಲಾಯಿತು. ತಪಾಸಣೆಗಳು ಯಶಸ್ವಿಯಾದ ನಂತರ ಆ ಫಿಕ್ಸ್ಚರ್ ಗ್ರಾಹಕರಲ್ಲಿ ಕಾರ್ಯಗತವಾಯಿತು. ತುಂಬಾ ದಿನಗಳ ತನಕ ಎಲ್ಲ ಕೆಲಸವು ಸರಿಯಾಗಿ ನಡೆಯಿತು. ಆದರೆ ಹಲವಾರು ದಿನಗಳ ನಂತರ ಅಕಸ್ಮಾತ್ತಾಗಿ ಕ್ಯಾಮ್‌ ಶಾಫ್ಟ್ ನ ಸಂಪೂರ್ಣ ಒಂದು ಬ್ಯಾಚ್ ರಿಜೆಕ್ಟ್‌ ಆಯಿತು. ಕ್ಯಾಮ್‌ನ ಲೊಬ್‌ನ ಯಂತ್ರಣೆಯನ್ನು ಮಾಡುತ್ತಿರುವಾಗ ಫೋರ್ಡಿಂಗ್‌ನಲ್ಲಿ ಮಚ್ಚೆಗಳು (ಕಲೆಗಳು) ಕಂಡುಬಂದವು. ಉತ್ಪಾದನೆಯನ್ನು ಮಾಡುವಾಗ ತುರ್ತುಪರಿಸ್ಥಿತಿಯನ್ನು ಎದುರಿಸಬೇಕಾಯಿತು, ಇದರಿಂದಾಗಿ ಎಲ್ಲರಿಗೂ ಚಿಂತೆಯನ್ನುಂಟು ಮಾಡುವ ಸ್ಥಿತಿಯು ಬಂತು. ಪ್ರಾರಂಭದಲ್ಲಿ ಸಹಜವಾಗಿಯೇ ಫಿಕ್ಸ್ಚರ್‌ನ ನಿರ್ದೋಷದ ಕುರಿತು ಅನುಮಾನಿಸಲಾಯಿತು. ಫಿಕ್ಸ್ಚರ್‌ನ ತಪಾಸಣೆಯನ್ನು ಮಾಡಿದಾಗ ಎಲ್ಲವೂ ಸರಿಯಾಗಿರುವುದು ಗಮನಕ್ಕೆ ಬಂತು. ಆಗ ಇದರ ಕುರಿತು ಗ್ರಾಹಕರ ಕಂಪನಿಗಳಿಗೆ ಭೇಟಿ ನೀಡಿ ಸಮಸ್ಯೆಗಳ ಆಳವಾದ ವಿಶ್ಲೇಷಣೆಯನ್ನು ಮಾಡಲಾಯಿತು. ಅಲ್ಲಿರುವ ಎಲ್ಲ ಪ್ರಕ್ರಿಯೆಗಳ ಕುರಿತು ಗ್ರಾಹಕರಲ್ಲಿರುವ ಎಲ್ಲ ಕೆಲಸ ಮಾಡುತ್ತಿರುವ
 
6_1  H x W: 0 x
ಗುಂಪುಗಳೊಂದಿಗೆ ಚರ್ಚೆಯನ್ನು ಮಾಡಲಾಯಿತು. ಈ ಚರ್ಚೆಯಲ್ಲಿ ಸಮಸ್ಯೆಯ ಮೂಲ ಕಾರಣವನ್ನು ಕಂಡುಹಿಡಿಯಲಾಯಿತು. ಮುಂಚೆ ಮಾಡಿರುವ ಸೆಟಿಂಗ್ ಆಪರೇಶನ್‌ ನಲ್ಲಿರುವುದು ಗಮನಕ್ಕೆ ಬಂತು ಮತ್ತು ಅದರಲ್ಲಿರುವ ದೋಷಗಳನ್ನು ನಿವಾರಿಸಿದ ನಂತರ ಎಲ್ಲ ಸಮಸ್ಯೆಗಳೂ ಇಲ್ಲದಂತಾದವು.

7_1  H x W: 0 x 
 
ಸೆಟಿಂಗ್ ಆಪರೇಶನ್ ಉರುಟಾಗಿರುವ ಜರ್ನಲ್ ವ್ಯಾಸದ ಸಾಧಾರಣವಾಗಿ ಮಧ್ಯಭಾಗದಲ್ಲಿ ಬಂದಲ್ಲಿ ಕೆಲಸ ನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲಾಗುತ್ತಿತ್ತು. ಇದರಲ್ಲಿ ಯಾವುದೇ ಕ್ಯಾಮ್‌ನಲ್ಲಿರುವ ಲೋಬ್‌ಗೆ ಅ್ಯಂಗ್ಯುಲರ್ ರೆಫರನ್‌ಸ್‌ ಪಡೆಯಲಾಗಿರಲಿಲ್ಲ. ಮಶಿನಿಂಗ್ ಅಲೌನ್‌ಸ್‌ ಕಡಿಮೆ ಇರುವ ಬದಿಯ ಮಧ್ಯಭಾಗದಲ್ಲಿ ಫೋರ್ಜಿಂಗ್‌ನ ಮಚ್ಚೆಗಳು (ಕಲೆಗಳು) ಕಂಡುಬರುತ್ತಿದ್ದವು. ಇದಕ್ಕೆ ಪರಿಹಾರವೆಂದು ಸೆಂಟರಿಂಗ್ ಆಪರೇಶನ್‌ನ ಫಿಕ್ಸ್ಚರ್‌ನಲ್ಲಿ ಕ್ಯಾಮ್‌ನ ಲೋಬ್‌ನ ಅ್ಯಂಗ್ಯುಲರ್ ಸಂದರ್ಭವನ್ನು ಪಡೆದು ಈ ಸಮಸ್ಯೆಗೆ ಪರಿಹಾರವನ್ನು ಮಾಡಲಾಯಿತು. ಗ್ರಾಹಕರು ಎದುರಿಸುತ್ತಿರುವ ಸಮಸ್ಯೆ ಎಂದರೆ ಅದು ನಮ್ಮದೇ ಸಮಸ್ಯೆ ಎಂದು ತಿಳಿದು ಕೆಲಸವನ್ನು ನಿರ್ವಹಿಸುವ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸಲಾಯಿತು.

8_1  H x W: 0 x 
ಕಾರಖಾನೆಯಲ್ಲಿ ಹಲವಾರು ತತ್ವಗಳ ಅನುಕರಣೆಯನ್ನು ಪ್ರಾರಂಭದಿಂದಲೇ ಕಾರ್ಯಗತಗೊಳಿಸಲಾಯಿತು. ಕಾರಖಾನೆಯಲ್ಲಿ ಹೆಚ್ಚಾಗಿ ಯಂತ್ರಚಾಲಕರು (ಮಶಿನ್ ಆಪರೇಟರ್) ಕಡಿಮೆ ಕಲಿತ ಯುವಕರಾಗಿದ್ದರೂ ಕೂಡಾ ಕೆಲಸದ ಗುಣಮಟ್ಟದ ಜವಾಬ್ದಾರಿಯನ್ನು ಅವರೇ ವಹಿಸುತ್ತಾರೆ. ಈ ಜವಾಬ್ದಾರಿಯನ್ನು ಅವರು ತಮ್ಮ ಸ್ವಂತದ್ದೇ ಆದ ಕರ್ತವ್ಯ ಎಂದು ತಿಳಿಯುತ್ತಾರೆ.
1. ಮಾನವನ ಕಷ್ಟವು ಸಾಕಷ್ಟು ಕಡಿಮೆ ಆಗಬೇಕು ಎಂಬ ವ್ಯವಸ್ಥೆಯನ್ನು ಮಾಡುವುದು
ಕಾರಖಾನೆಯಲ್ಲಿರುವ ಸೆಟಪ್ ಇದು ಜಾಗತಿಕ ಮಟ್ಟದ್ದಾಗಿರಬೇಕು (ವರ್ಲ್ಡ್‌ ಕ್ಲಾಸ್ ಸೆಟಪ್) ಎಂಬುದಕ್ಕೋಸ್ಕರ ನಿರಂತರವಾದ ಪ್ರಯತ್ನವನ್ನು ಮಾಡಲಾಗುತ್ತದೆ. ಉದಾಹರಣೆ,
⦁ ಉತ್ಪಾದನೆಯ ವಿಭಾಗಕ್ಕೋಸ್ಕರ ಅತ್ಯಾಧುನಿಕ ಸಿ.ಎನ್.ಸಿ. ಮಶಿನ್‌ಗಳು ಮತ್ತು ತಪಾಸಣೆಗೋಸ್ಕರ ಸಿ.ಎಮ್.ಎಮ್. 
⦁ ಡಿಸೈನ್ ವಿಭಾಗದಲ್ಲಿ ಪರಿಪೂರ್ಣವಾದ ಕಂಪ್ಯೂಟರ್ ಮತ್ತು ಅದಕ್ಕೋಸ್ಕರ ಬೇಕಾಗುವ 3ಈ ಸಾಫ್ಟ್‌‌ವೇರ್.
⦁ ಪ್ರತಿಯೊಂದು ಡಿಸೈನ್‌ಗೆ ಮಾಡಲಾಗುವ ಸಿಮ್ಯುಲೇಶನ್
⦁ ನುಣುಪಾದ, ಯೋಗ್ಯವಾದ ಮತ್ತು ಶಿಸ್ತಾಗಿ ಅಳವಡಿಸಲಾಗಿರುವ ಲೇ-ಔಟ್.
⦁ ಸೆಲ್ಫ್‌ ಡಿಸಿಪ್ಲಿನ್ಡ್‌ ಮತ್ತು ಸಿಸ್ಟಮ್ಯಾಟಿಕ್ ಕೆಲಸದ ರೀತಿ.
2. ಪ್ರತಿಯೊಂದು ಕಾರ್ಯ ಪ್ರಣಾಳಿಕೆಯ (ವರ್ಕ್ ಪ್ರೊಸೆಸ್) ವಿವರಗಳ ಕುರಿತು ಅಭ್ಯಾಸವನ್ನು ಮಾಡಿ ಅದರಲ್ಲಿ ಆಗತ್ಯವಿರುವ ಎಲ್ಲ ಕೆಲಸಗಳನ್ನು ತೋರಿಸುವಂತಹ ಕೋಷ್ಟಕಗಳನ್ನು ತಯಾರಿಸಿ ಅವುಗಳನ್ನು ಕೆಲಸದ ಜಾಗದಲ್ಲಿ ಹಚ್ಚುವುದು. ಇದರ ಪರಿಣಾಮವೆಂದರೆ ಒಟ್ಟಾಗಿ ಕೆಲಸ ಮಾಡುವಾಗ ಯಾವುದೇ ಅಂಶವನ್ನು ತಪ್ಪದೇ ಅಥವಾ ಕಣ್ಣು ತಪ್ಪಿ ಉಳಿಯದೇ ಮತ್ತು ಒಂದು ವೇಳೆ ತಪ್ಪಿದ್ದರೂ ಅದು ಅತ್ಯಂತ ಕಡಿಮೆ ವೇಳೆಯಲ್ಲಿ ಮತ್ತು ಶ್ರಮದಿಂದ ಗಮನಕ್ಕೆ ಬಂದು ದುರಸ್ತಿ ಮಾಡುವುದು ಸಾಧ್ಯವಾಯಿತು. ಫ್ಲೋ ಚಾರ್ಟ್‌ನಿಂದಾಗಿ ಎಲ್ಲ ಅಂಶಗಳು ಹೇಗೆ ಗಮನಕ್ಕೆ ಬರುತ್ತವೆ, ಎಂಬುದನ್ನು ತಿಳಿದುಕೊಳ್ಳಲು ಕೋಷ್ಟಕ ಕ್ರ. 1 ನೋಡಿರಿ.
3. ಕೆಲಸ ಮಾಡುತ್ತಿರುವಾಗ ಮಾನವನ ತಪ್ಪುಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ಅತ್ಯಾಧುನಿಕವಾದ ತಂತ್ರದ ಬಳಕೆ.
⦁ ಎಲ್ಲ ಡ್ರಾಯಿಂಗ್‌ಗಳು ಕಂಪ್ಯೂಟರ್‌ನ ಪ್ರೊಗ್ರಾಮ್‌ಗೆ ಅನುಸಾರವಾಗಿ ತಯಾರಿಸುವುದು.

9_1  H x W: 0 x 
ಸರ್ವರ್‌ನಲ್ಲಿ ಸುರಕ್ಷಿತವಾಗಿ ಶೇಖರಿಸುವುದು.
⦁ ಪ್ರತಿಯೊಬ್ಬ ಕೆಲಸಗಾರನಿಗೆ ಅವನೊಂದಿಗೆ ಸಂಬಂಧಿಸಿರುವ ಕಾರ್ಯವಸ್ತು ಅಥವಾ ಅಸೆಂಬ್ಲಿಯ ಡ್ರಾಯಿಂಗ್ ಅವರ ಕೆಲಸದ ಸ್ಥಳದ ಹತ್ತಿರ ಕಂಪ್ಯೂಟರ್‌ನಲ್ಲಿ ಲಭಿಸುವುದು.
⦁ ಪ್ರತಿಯೊಂದು ಕಾರ್ಯವಸ್ತುವು ಪ್ರತಿಯೊಂದು ಹಂತದಲ್ಲಿ ನಿಖರವಾಗಿ ಯಾವ ಪ್ಯಾರಾಮೀಟರ್ಸ್‌ಗಳನ್ನು ಪರೀಕ್ಷಿಸಬೇಕು, ಎಂಬುದರ ಕುರಿತಾಗಿ ತಯಾರಿಸಿರುವ ಚೆಕ್‌ಲಿಸ್ಟ್‌ ಕೂಡಾ ಕಂಪ್ಯೂಟರ್‌ನ ವಿಶಿಷ್ಟವಾದ ಪಾರ್ಮೆಟ್‌ನಲ್ಲಿ ಲಭ್ಯವಿರಬೇಕು.
⦁ ಪ್ರತಿಯೊಂದು ಕಾರ್ಯವಸ್ತುವಿಗೆ ನೀಡಿರುವ ಚೆಕ್‌ಲಿಸ್ಟ್‌‌ಗೆ ಅನುಸಾರವಾಗಿ ಆಯಾ ಹಂತದಲ್ಲಿ ತಪಾಸಣೆಯನ್ನು ಕಂಪ್ಯೂಟರ್‌ನಲ್ಲಿಯೇ ಎರಡನೇ ಫಾರ್ಮೆಟ್‌ನಲ್ಲಿ ಆ ಮಾಹಿತಿಯನ್ನು ತುಂಬಿಸುವ ವ್ಯವಸ್ಥೆಯು ಇರಬೇಕು.
ಈ ಎಲ್ಲ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಶೇಖರಿಸಿದಾಗ ಯಾರೇ ಕೆಲಸಗಾರನು ಯಾವುದೇ ಸಮಯದಲ್ಲಿ ನೋಡಬಲ್ಲರು, ಆದರೆ ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದು ಅಸಾಧ್ಯ.
⦁ ಈ ಎಲ್ಲ ಅಂಶಗಳಿಂದಾಗಿ ಕೆಲಸ ಮಾಡುತ್ತಿರುವಾಗ ಯಾವುದೇ ರೀವರ್ಕ್ ಅಥವಾ ರಿಜೆಕ್ಷನ್ ಆಗದೇ ನಿರ್ದೋಷವಾಗಿ ಕೆಲಸ ಆಗುವುದು ಹೆಚ್ಚಾಗಿ ಸಾಧ್ಯವಾಗುತ್ತದೆ. ಇದರಿಂದ ಅನಾವಶ್ಯಕವಾದ ಖರ್ಚನ್ನು ತಡೆಯಲಾಗುತ್ತದೆ.

10_1  H x W: 0
 
4. ಯಾವುದೇ ಗ್ರಾಹಕರಿಗೋಸ್ಕರ ತಯಾರಿಸಿರುವ ಪ್ರತಿಯೊಂದು ಫಿಕ್ಸ್ಚರ್‌ನ ಕೊನೆಯ ಪರೀಕ್ಷೆಯನ್ನು ಮಾಡಿಯೇ ಅದನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ.
5. ಕೊಟೇಶನ್‌ನ ಕುರಿತು ಗ್ರಾಹಕರೊಂದಿಗೆ ಇಟ್ಟಿರುವ ವಿಶ್ವಾಸ ಮತ್ತು ಪಾರದರ್ಶಕತೆ.
ನಮ್ಮ ಕಂಪನಿಯಲ್ಲಿ ಸ್ವತಂತ್ರವಾದ ಮಾರ್ಕೆಟಿಂಗ್ ವಿಭಾಗವೇ ಇಲ್ಲದಿರುವುದು, ನಮ್ಮದು ಇನ್ನೊಂದು ವೈಶಿಷ್ಟ್ಯವಾಗಿದೆ. ಮೇಲಿನ ಎಲ್ಲ ಜಾಗತಿಕ ಗುಣಮಟ್ಟದ ರೀತಿಯಲ್ಲಿಯೇ ಮಾರ್ಕೆಟಿಂಗ್ ವಿಭಾಗದವರು ಕೆಲಸವನ್ನು ಮಾಡುತ್ತಾರೆ. ಇದರ ಇನ್ನೊಂದು ಅರ್ಥವೆಂದರೆ, ನಮ್ಮಲ್ಲಿ ಗ್ರಾಹಕರೊಂದಿಗೆ ಸಂವಾದವನ್ನು ಮಾಡುವಂತಹ ವಿಭಾಗವು ಇಲ್ಲ ಎಂದೇನು ಹೇಳಲಾಗುವುದಿಲ್ಲ.

11_1  H x W: 0  
ಗ್ರಾಹಕರ ಬೇಡಿಕೆಗಳನ್ನು ಗಮನಿಸಲು ಒಂದು ಸುಲಭವಾದ ಕೆಲಸದ ರೀತಿ ಇದೆ. ಯಾವುದೇ ಫಿಕ್ಸ್ಚರ್‌ಗೋಸ್ಕರ ವಿಚಾರಿಸಲು ಬರುವಾಗ ಗ್ರಾಹಕರಿಗೆ ಜಾಬ್‌ನ ಕುರಿತು ಸೂಕ್ಷ್ಮವಾಗಿ ಆಭ್ಯಾಸ ಮಾಡಿ ಬರಲು ಹೇಳುತ್ತೇವೆ. ಅದರ ನಂತರ ಜಾಬ್‌ಗೆ ಸಂಬಂಧಿಸಿರುವ ಎಲ್ಲ ಮಾಹಿತಿಯನ್ನು ನಾವು ತಯಾರಿಸಿ ಒಂದು ಫಾರ್ಮ್‌ನಲ್ಲಿ ಬರೆಯುತ್ತೇವೆ. ಈ ಮಾಹಿತಿ ಅಂದರೆ ಎರಡೂ ಕಂಪನಿಗಳು ಮನ್ನಿಸಿರುವ ಪ್ರಾಥಮಿಕವಾದ ಅಂಶಗಳು. ಈ ಅಂಶಗಳಿಂದಲೇ ಮುಂದಿನ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಇದರ ಮಾರಾಟದ ನಂತರದ ಸಂವಾದ ಎಂದರೆ ಈ ಫಿಕ್ಸ್ಚರ್‌ನ ಯಶಸ್ವಿಯಾದ ಅನುಷ್ಠಾನ ಇದು ಕೇವಲ ಒಂದು ಔಪಚಾರಿಕವಾದ ಭಾಗವೇ ಸರಿ. ಈಗ ನಾವು ಒಂದು ಉದಾಹರಣೆಯನ್ನು ನೋಡೋಣ.
ಡಿಸೆಲ್ ಇಂಜಿನ್‌ನ ‘ಆಯಿಲ್ ಪ್ಯಾನ್’ಗೋಸ್ಕರ ಎಚ್.ಎಮ್.ಸಿ. ಮಶಿನ್‌ನಲ್ಲಿರುವ ಫಿಕ್ಸ್ಚರ್
ಡಿಸೆಲ್ ಇಂಜಿನ್‌ನ ಉತ್ಪಾದನೆಯನ್ನು ಮಾಡುವ ಒಂದು ಹೆಸರಾಂತ ಉದ್ಯಮಿಗಳಿಂದ ಅವರ ಆಯಿಲ್ ಪ್ಯಾನ್‌ನ ಎಚ್.ಎಮ್.ಸಿ. ಮಶಿನ್‌ನಲ್ಲಿರುವ ಸಂಪೂರ್ಣವಾದ ಯಂತ್ರಣೆಗೋಸ್ಕರ ಫಿಕ್ಸ್ಚರ್ ತಯಾರಿಸಲು ವಿಚಾರಣೆಯನ್ನು ಮಾಡಲಾಯಿತು. ಈ ಭಾಗವು ಕಡಿಮೆ ತೂಕದ್ದಾಗಿತ್ತು, ಅಲ್ಯುಮಿನಿಯಮ್‌ನಂತರ ಲೋಹದಿಂದ ತಯಾರಿಸಲಾಗಿತ್ತು. ಆದರೆ ಅದು ಕಡಿಮೆ ದಪ್ಪ ಇರುವಂತಹದ್ದಾಗಿತ್ತು ಮತ್ತು ಅದರ ಆಕಾರವು ತುಂಬಾ ಅಳದಂತೆ ಇತ್ತು. ಅದರ ಈ ವೈಶಿಷ್ಟ್ಯಪೂರ್ಣವಾದ ರಚನೆಯಿಂದಾಗಿ ಯಂತ್ರಣೆಯನ್ನು ಮಾಡುವಾಗ ಸವಾಲುಗಳನ್ನು ಎದುರಿಸಬೇಕಾಗುವ ಪರಿಸ್ಥಿತಿಯೂ ಇತ್ತು. ಅದನ್ನು ಸ್ವಲ್ಪ ಬಿಗಿ ಮಾಡಿದರೂ ಕೂಡಾ ಅದರ ಮೂಲ ಆಕಾರ ಬದಲಾಯಿಸಲ್ಪಡುತ್ತಿತ್ತು ಮತ್ತು ಅದರ ಗುಣಮಟ್ಟವು ಹಾಳಾಗುತ್ತಿತ್ತು. ಅದರಲ್ಲಿ ನಿರಂತರತೆಯೂ ಇರುತ್ತಿರಲಿಲ್ಲ ಮತ್ತು ಕಡಿಮೆ ಬಿಗಿ ಮಾಡಿ ಯಂತ್ರಣೆಯನ್ನು ಮಾಡಿದಲ್ಲಿ ಉತ್ಪಾದನೆಯ ಸಮಯವು ಹೆಚ್ಚಾಗಿ ಉತ್ಪಾದಕತೆಯು ಕಡಿಮೆ ಆಗುತ್ತಿತ್ತು. ಇದರ ಹೊರತಾಗಿ ಒಂದು ವೇಳೆ ಯಂತ್ರಣೆಯನ್ನು ಮಾಡುತ್ತಿರುವಾಗ ಒತ್ತಡವು ಹೆಚ್ಚಾಗಬಾರದು ಎಂದು ಆಪರೇಶನ್‌ಗಳನ್ನು ವಿಂಗಡಿಸಿದ್ದರಿಂದ ಯಂತ್ರಣೆಗೆ ತಗಲುವ ಸಮಯವೂ ಹೆಚ್ಚುತ್ತಿತ್ತು. ಇದರ ಪರಿಣಾಮದಿಂದ ಗ್ರಾಹಕರಿಗೆ ಅಪೇಕ್ಷಿಸಿರುವ ಗುಣಮಟ್ಟದಲ್ಲಿ, ಬೆಲೆಯಲ್ಲಿ ಮತ್ತು ವಿಶ್ವಾಸದಿಂದ ಪೂರೈಕೆ ಮಾಡುವುದೂ ಕಷ್ಟಕರವಾಯಿತು.
ನಾವು ಈ ಸವಾಲನ್ನು ಸ್ವೀಕರಿಸಿ ಸಂಪೂರ್ಣವಾದ ವಿಚಾರ ಮಾಡಿ ಅತ್ಯುತ್ತಮವಾದ ಉಪಾಯ ನೀಡುವ ಫಿಕ್ಸ್ಚರ್ ಮಾಡಿ ಕೊಟ್ಟೆವು. ಈ ಫಿಕ್ಸ್ಚರ್‌ನ ಕಲ್ಪನೆಯಿಂದ ಈ ಆಯಿಲ್ ಪ್ಯಾನ್ ಕೇವಲ ಎರಡು ಸೆಟಪ್‌ನಲ್ಲಿಯೇ ಮಾಡುವ ಪ್ರಸ್ತಾಪವನ್ನು ತಿಳಿಸಲಾಯಿತು. ಈ ಸೆಟಪ್‌ನ ಹಲವಾರು ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
ಎ. ಕಾರ್ಯವಸ್ತು ಬಿಗಿ ಮಾಡುವ ಕೆಲಸವು ಒಂದೇ ರೀತಿ ಇರಲು ಮತ್ತು ನಿರಂತರತೆ ಇರುವ ದೃಷ್ಟಿಯಲ್ಲಿ ಎರಡೂ ಸೆಟಪ್ ಹೈಡ್ರಾಲಿಕ್ ರೀತಿಯಲ್ಲಿ ಬಿಗಿ ಮಾಡುವ ವ್ಯವಸ್ಥೆಯನ್ನು ಮಾಡಲಾಯಿತು.

12_1  H x W: 0  
ಬಿ. ಮೊದಲನೇ ಸೆಟಪ್‌ ನಲ್ಲಿ ಆಯಿಲ್ ಪ್ಯಾನ್‌ ನ ಯಾವ ಸರ್ಫೇಸ್‌ನ ಇಂಜಿನ್ ಬ್ಲಾಕ್‌ನಲ್ಲಿ ಒರಗಿಸುತ್ತೇವೆಯೋ, ಅದರ ಮಿಲಿಂಗ್, ಅದರಲ್ಲಿರುವ ಗ್ರೂವ್, ಮುಂದಿನ ಆಪರೇಶನ್‌ಗೆ ಬೇಕಾಗುವ ರಂಧ್ರಗಳು (ರೆಫರನ್‌ಸ್‌ ಹೋಲ್‌ಸ್‌) ಮತ್ತು ಇನ್ನಿತರ ಬೋಲ್ಟ್‌‌ಗಳಲ್ಲಿ ಅಳವಡಿಸಲು ಬೇಕಾಗುವ ರಂಧ್ರಗಳು (ಮೌಂಟಿಂಗ್ ಹೋಲ್‌ಸ್‌) ಇಂತಹ ಆಪರೇಶನ್‌ಗಳನ್ನು ಮಾಡುವುದನ್ನು ನಿರ್ಧರಿಸಲಾಯಿತು. ಸಾಮಾನ್ಯವಾಗಿ ಯಾವುದೇ ಮಿಲಿಂಗ್‌ನ ಆಪರೇಶನ್ ಮಾಡುವಾಗ ಮಶಿನ್‌ನ ಸ್ಪಿಂಡಲ್‌ನ ವಿರುದ್ಧ ಬದಿಗೆ ಕಾರ್ಯವಸ್ತು ಎಳೆಯಲ್ಪಟ್ಟು ಒರಗಿಸಲಾಗುತ್ತದೆ ಮತ್ತು ಬಿಗಿ ಮಾಡಲಾಗುತ್ತದೆ. ಆದರೆ ಈ ಫಿಕ್ಸ್ಚರ್‌ನಲ್ಲಿ ಸ್ಪಿಂಡಲ್‌ನ ಬದಿಗೆ ಜಾಬ್ ಕಾರ್ಯವಸ್ತುವನ್ನು ಬಿಗಿ ಮಾಡುವ ವ್ಯವಸ್ಥೆಯನ್ನು ಮಾಡಲಾಯಿತು. (ಚಿತ್ರ ಕ್ರ. 4) ಇದಕ್ಕೋಸ್ಕರ ಕಾರ್ಯವಸ್ತುವಿನ ಕಾಸ್ಟಿಂಗ್‌ನಲ್ಲಿರುವ 4 ಪ್ರೊಜೆಕ್ಷನ್ಸ್‌‌ಗಳ ಉಪಯೋಗವನ್ನು ಮಾಡಲಾಯಿತು. ಹೈಡ್ರಾಲಿಕ್ ಕ್ಲ್ಯಾಂಪಿಂಗ್‌ನ ಸಹಾಯದಿಂದ ಆ ರೆಸ್ಟಿಂಗ್‌ನ ಭಾಗದಲ್ಲಿ ಕಾರ್ಯವಸ್ತುವನ್ನು ಬಿಗಿ ಮಾಡಲಾಯಿತು. ರೆಸ್ಟಿಂಗ್‌ನ ಭಾಗವು ತುಂಬಿರುವುದರಿಂದ ಕಾರ್ಯವಸ್ತುವಿನ ಆಕಾರವನ್ನು ಬದಲಾಯಿಸದೇ ಬಿಗಿ ಮಾಡುವ ಒತ್ತಡವನ್ನು ಹೆಚ್ಚಿಸಲಾಯಿತು. ಕಟಿಂಗ್ ಸ್ಟೀಡ್ ಹೆಚ್ಚಿಸಿ ಕೆಲಸ ಮಾಡುವಲ್ಲಿ ಆಳವಾಗಿರುವ ಭಾಗಗಳ ಕೆಳಗೆ 3 ಕಡೆಗಳಲ್ಲಿ ಹೈಡ್ರಾಲಿಕ್ ವರ್ಕ್-ಸಪೋರ್ಟ್ ನೀಡಲಾಯಿತು. ಇದರ ಪರಿಣಾಮದಿಂದಾಗಿ ಕಾರ್ಯವಸ್ತು ಅಂಕು-ಡೊಂಕಾಗದೇ ದೃಢವಾಗಿ ಬಿಗಿ ಮಾಡಲಾಯಿತು ಮತ್ತು ಹೆಚ್ಚು ಕಟಿಂಗ್ ಸ್ಟೀಡ್ ನೀಡಿ ಸೈಕಲ್ ಟೈಮ್ ಕೂಡಾ ಕಡಿಮೆ ಮಾಡಲಾಯಿತು. ಈ ಸೆಟಪ್‌ನಲ್ಲಿ 8 ನಿಮಿಷದಲ್ಲಿ ಸಂಪೂರ್ಣ ಯಂತ್ರಣೆಯನ್ನು ಮಾಡುವುದು ಸಾಧ್ಯವಾಯಿತು.
 
ಸಿ. ಇನ್ನೊಂದು ಸೆಟಪ್ ಅದೇ ಫಿಕ್ಸ್ಚರ್‌ನ ಎರಡನೇ ಬದಿಯಲ್ಲಿ ಬಳಸಿ ಮಾಡುವ ವಿಚಾರವನ್ನು ನೀಡಲಾಯಿತು. ಮೊದಲನೇ ಸೆಟಪ್‌ನಲ್ಲಿರುವ ವೈಶಿಷ್ಟ್ಯಗಳಿಂದಾಗಿ ಎರಡನೇ ಸೆಟಪ್‌ನಲ್ಲಿ ಮಿಲಿಂಗ್ ಮಾಡಿರುವ ಸರ್ಫೇಸ್‌ನಲ್ಲಿ ಕಾರ್ಯವಸ್ತುವನ್ನು ಒರಗಿಸಿ ಮತ್ತು ರೆಫರನ್‌ಸ್‌ ರಂಧ್ರದಲ್ಲಿ ಕಾರ್ಯವಸ್ತುವನ್ನು ಅಳವಡಿಸಿ ಬಿಗಿ ಮಾಡಲಾಯಿತು ಮತ್ತು ಯಂತ್ರಣೆಗೋಸ್ಕರ ಕಾರ್ಯವಸ್ತುವನ್ನು ಸಂಪೂರ್ಣವಾಗಿ ಖಾಲಿಯಾಗಿ ಲಭ್ಯವಾಯಿತು. ಈ ಸೆಟಪ್‌ನಲ್ಲಿ ಯಂತ್ರಣೆಯು 5 ನಿಮಿಷದಲ್ಲಿಯೇ ಪೂರ್ತಿ ಮಾಡುವುದು ಸಾಧ್ಯವಾಯಿತು.
ಈ ರೀತಿಯಲ್ಲಿ ಒಂದೇ ಫಿಕ್ಸ್ಚರ್‌ನಲ್ಲಿ ಎರಡು ಸೆಟಪ್‌ನ ಸೆಟಿಂಗ್ ಮಾಡಿ ಎಚ್.ಎಮ್.ಸಿ. ಮಶಿನ್‌ನ ಒಂದೇ ಪ್ಯಾಲೇಟ್‌ನಲ್ಲಿ ಗ್ರಾಹಕರಿಗೆ ಬೇಕಾಗಿರುವ ನಿರಂತರವಾದ ಗುಣಮಟ್ಟದಲ್ಲಿ ಕೇವಲ 13 ನಿಮಿಷಗಳಲ್ಲಿ ಒಂದು ಕಾರ್ಯವಸ್ತುವಿನ ಸಂಪೂರ್ಣವಾದ ಯಂತ್ರಣೆಯನ್ನು ಮಾಡುವುದು ಸಾಧ್ಯವಾಯಿತು. ನಮ್ಮ ಕಂಪನಿಯಲ್ಲಿ ಎಲ್ಲ ಪರೀಕ್ಷೆಗಳನ್ನು ಮಾಡಿ, ಅದನ್ನು ದೃಢಪಡಿಸಿ ಗ್ರಾಹಕರಿಗೆ ನೀಡಲಾಯಿತು. ನಮ್ಮ ಎಲ್ಲ ತಂಡವು ಇದಕ್ಕೆ ಅತ್ಯಮೂಲ್ಯವಾದ ಸಹಭಾಗವನ್ನು ನೀಡಿದರು. ನಾವು ಈ ಉದ್ಯಮವನ್ನು ಕೇವಲ ಲಾಭಕಾರಿಯಾಗಿ ಮಾಡದೇ, ನಮ್ಮ ಗ್ರಾಹಕರಿಗೆ ರಿಲಾಯೇಬಲ್ ಮತ್ತು ಪ್ರಿಫರ್ಡ್ ಸಪ್ಲಾಯರ್ ಎಂಬ ವಿಶ್ವಾಸಕ್ಕೆ ಪಾತ್ರರಾದೆವು.
 
13_1  H x W: 0
 ಶ್ರೀಧರ ನವಘರೆ
 ನಿರ್ದೇಶಕರು,
 ಎ.ಎಸ್.ಆರ್. ಇಂಡಸ್ಟ್ರೀಜ್ 
 9823077438
 ವಾಹನ ಉದ್ಯಮಕ್ಕೆ ಬೇಕಾಗುವ ಹೆವಿ ಮತ್ತು ಕ್ಲಿಷ್ಟ ಆಕಾರದ ಕಾರ್ಯವಸ್ತುಗಳಿಗೆ ನಿರ್ದೋಷನವಾದ ಯಂತ್ರಣೆಯನ್ನು ಮಾಡಲು ಬೇಕಾಗುವ ಫಿಕ್ಸ್ಚರ್ ಗಳ ಕೆಲಸಗಳನ್ನು ಮಾಡುವಲ್ಲಿ 25 ವರ್ಷಗಳ ಅನುಭವವನ್ನು ಶ್ರೀಧರ ನವಘರೆಯವರು ಹೊಂದಿದ್ದಾರೆ. ಉದ್ಯೋಗವನ್ನು ಬಿಟ್ಟು ಎ.ಎಸ್.ಆರ್. ಇಂಡಸ್ಟ್ರೀಜ್ ಎಂಬ ಕಂಪನಿಯ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.